Mysuru, Apr. 10: A tribute program was organized herein Rashtrotthana Vidya Kendra – Vijayanagar for Nadoja Dr. S. R. Ramaswamy. Prayers were offered on his passing away in the program and the school principal, Sri Shivaraj, spoke about the life, achievements and contributions of the great man to the society. His simplicity, restraint and knowledge were special. His passing away has caused an irreparable loss to the Kannada literary field. The principal said that the many works he has written will always inspire people. At the end of the program, students, teachers and non-teaching staff paid their respects by observing a silent vigil.

ಮೈಸೂರು, ಏ. 10: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ
ನಾಡೋಜ ಡಾ. ಎಸ್. ಆರ್. ರಾಮಸ್ವಾಮಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಗೌರವಪೂರ್ವಕವಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಅವರ ಅಗಲಿಕೆಯ ಕುರಿತು ಪ್ರಾರ್ಥಿಸಲಾಯಿತು ಹಾಗೂ ಮಹನೀಯರ ಜೀವನ, ಸಾಧನೆಗಳು ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಶಾಲೆಯ ಪ್ರಧಾನಾಚಾರ್ಯರಾದ ಶ್ರೀ ಶಿವರಾಜ್ ಅವರು ತಿಳಿಸಿದರು. ಶ್ರೀಯುತರ ಸರಳತೆ, ಸಂಯಮ, ಜ್ಞಾನತ್ವ ವಿಶೇಷತೆಯಾಗಿತ್ತು. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ಅವರ ಬರೆದಿರುವ ಹಲವಾರು ಕೃತಿಗಳು ಸದಾ ಜನರಿಗೆ ಪ್ರೇರಣೆಯಾಗಿರುತ್ತವೆ ಎಂದು ಪ್ರಾಂಶುಪಾಲರು ತಿಳಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದ್ಧಿ ವರ್ಗದವರು ಮೌನಾಚರಣೆ ಮಾಡುವ ಮೂಲಕ ಗೌರವ ಸಮರ್ಪಿಸಲಾಯಿತು.