


Under-14 boys’ team selected for the national level by defeating Andhra Pradesh team by 12 points Mysuru, Aug. 26: Rashtrotthana Vidya Kendra – Vijayanagar’s Under-14 boys’ team has emerged champions after performing well in the zonal-level basketball tournament organised by Vidya Bharati. In the final match, the Vijayanagar team defeated the Andhra Pradesh team by 12 points and won the title. A total of 12 students participated in this team, including 9 students from RVK – Vijayanagar, 2 students from RVK – Arkavati and 1 student from RVK – Davangere. With this remarkable victory, the Rashtrotthana Vidya Kendra’s Under-14 boys’ basketball team was selected for the national-level tournament.
- In the coming days, the team will participate in the national-level competition to be held in Mangaluru.
ಮೈಸೂರು, ಆ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದ ಅಂಡರ್–14 ಬಾಲಕರ ತಂಡವು ವಿದ್ಯಾಭಾರತಿ ವತಿಯಿಂದ ಆಯೋಜಿಸಲಾಗಿದ್ದ ವಲಯ ಮಟ್ಟದ ಬಾಸ್ಕೆಟ್ಬಾಲ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಚಾಂಪಿಯನ್ ಪಟ್ಟಕ್ಕೇರಿದೆ. ಫೈನಲ್ ಪಂದ್ಯದಲ್ಲಿ ವಿಜಯನಗರ ತಂಡವು ಆಂಧ್ರಪ್ರದೇಶ ತಂಡವನ್ನು 12 ಅಂಕಗಳ ಅಂತರದಿಂದ ಮಣಿಸಿ ಭರ್ಜರಿ ಗೆಲುವು ಸಾಧಿಸಿತು. ಈ ತಂಡದಲ್ಲಿ:
- ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದ 9 ವಿದ್ಯಾರ್ಥಿಗಳು,
- ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯ 2 ವಿದ್ಯಾರ್ಥಿಗಳು
- ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯ 1 ವಿದ್ಯಾರ್ಥಿ ಸೇರಿದಂತೆ ಒಟ್ಟು 12 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಈ ಗಮನಾರ್ಹ ಗೆಲುವಿನೊಂದಿಗೆ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಅಂಡರ್–14 ಬಾಲಕರ ಬಾಸ್ಕೆಟ್ಬಾಲ್ ತಂಡವು ರಾಷ್ಟ್ರೀಯ ಮಟ್ಟದ ಪಂದ್ಯಾವಳಿಗೆ ಆಯ್ಕೆಯಾದರು. ಮುಂಬರುವ ದಿನಗಳಲ್ಲಿ, ತಂಡವು ಮಂಗಳೂರಿನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದೆ.