Varamahalakshmi Puja in RVK – Vijayanagara

Home > News & Events >Varamahalakshmi Puja in RVK – Vijayanagara

Mysuru, Aug 23: Varamahalakshmi festival was celebrated herein Rashtrotthana Vidya Kendra – Vijayanagara with the aim of inculcating the value of culture and religious spirit among the students.The school premises were decorated with rangoli, flower garlands and lamps. It created a festive atmosphere. An idol of Goddess Lakshmi, a symbol of wealth and prosperity, was decorated. The program was started by laying flowers by Principal, Sri Shivraj N, Sri Nagesh, the school’s Sanskrit teacher, recited the Vedas. The teachers enthusiastically participated in the puja dressed in traditional dress. Everyone participated in the mantra chanting and performed bhajans. The Pradhanacharya talked about cultural heritage and the role of festivals in fostering a sense of unity and solidarity, spiritual and cultural aspects of the Varamahalakshmi festival. They encouraged the students to participate in such a festival.At the end prasadam was distributed to all.

ಮೈಸೂರು, ಆಗಸ್ಟ್ 23: ವಿದ್ಯಾರ್ಥಿಗಳಲ್ಲಿ ಸಂಸ್ಕೃತಿಯ ಮೌಲ್ಯವನ್ನು ಧಾರ್ಮಿಕ ಭಾವವನ್ನು ಬೆಳೆಸುವ ಉದ್ದೇಶಕ್ಕಾಗಿ ವರಮಹಾಲಕ್ಷ್ಮಿ ಹಬ್ಬವನ್ನು ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಆಚರಿಸಲಾಯಿತು.
ಶಾಲಾ ಆವರಣವನ್ನು ರಂಗೋಲಿ, ಹೂವು ಮಾಲೆ ದೀಪಗಳಿಂದ ಅಲಂಕರಿಸಲಾಗಿತ್ತು. ಇದು ಹಬ್ಬದ ವಾತಾವರಣವನ್ನು ಮೂಡಿಸಿತ್ತು. ಸಂಪತ್ತು ಮತ್ತು ಸಂಮೃದ್ಧಿಯ ಸಂಕೇತವಾದ ಲಕ್ಷ್ಮಿ ದೇವಿಯ ಮೂರ್ತಿಯನ್ನು ಅಲಂಕರಿಸಲಾಗಿತ್ತು. ಪ್ರಧಾನಾಚಾರ್ಯರಾದ ಶ್ರೀ ಶಿವರಾಜ್ ಎನ್. ಅವರು ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಶಾಲೆಯ ಸಂಸ್ಕೃತ ಶಿಕ್ಷಕರದ ಶ್ರೀ ನಾಗೇಶ್ ಅವರು ವೇದಪಠಣ ಮಾಡಿದರು. ಶಿಕ್ಷಕರು ಸಾಂಪ್ರದಾಯಿಕ ಉಡುಗೆ ಧರಿಸಿ ಪೂಜೆಯಲ್ಲಿ ಉತ್ಸಾಹದಿಂದ ಪಾಲ್ಗೊಂಡರು. ಮಂತ್ರಪಠಣದಲ್ಲಿ ಎಲ್ಲರೂ ಪಾಲ್ಗೊಂಡು ಭಜನೆ ಗಳನ್ನು ಮಾಡಿದರು.ಪ್ರಧಾನಾಚಾರ್ಯರು ಸಾಂಸ್ಕೃತಿಕ ಪರಂಪರೆ ಮತ್ತು ಏಕತೆ ಮತ್ತು ಒಗ್ಗಟ್ಟಿನ ಭಾವವನ್ನು ಬೆಳೆಸುವಲ್ಲಿ ಹಬ್ಬಗಳ ಪಾತ್ರ, ವರಮಹಾಲಕ್ಷ್ಮಿ ಹಬ್ಬದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಅಂಶಗಳ ಕುರಿತು ಮಾತನಾಡಿದರು. ಇಂತಹ ಉತ್ಸವದಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕೆಂದು ಹುರಿದುಂಬಿಸಿದರು. ಕೊನೆಯಲ್ಲಿ ಎಲ್ಲರಿಗೂ ಪ್ರಸಾದವನ್ನು ಹಂಚಲಾಯಿತು.

Scroll to Top