State Award to Nandish B, Teacher @ RVK – Vijayanagar

Home > News & Events >State Award to Nandish B, Teacher @ RVK – Vijayanagar

Mysuru, September 28: Karnataka State Private School Teachers’ Association(R) honoured Nandisha B, a Kannada teacher of Rashtrotthana Vidya Kendra – Vijayanagar, with the state-level best teacher award in recognition of his achievements in the field of education for 19 years. In his teaching career of 19 years, he has given 100% results without fail, many students have scored 125/125 marks in state curriculum schools for 7 consecutive years. Rest of the students also scored more than 100 out of 125 marks. And then CBSE for 11 years. In school too, students are well guided to get the result of not less than 90 marks out of 100 marks. Apart from this, in 2007 Tarikere Kirti Prakashan honoured him with the title of ‘Kannada Kanmani’ in recognition of his success in creating a love of Kannada language and literature among the students. Considering all these elements, the Karnataka State Private School Teachers Association presented Nandish B with an award on 28th September 2024, held at the K. Venkatagiri Gowda Memorial Hall within the premises of Jnana Bharati University, Bengaluru. During the award ceremony, they were honoured with a certificate, a memento and a cash prize of 2000 rupees. Nandish B is also active in the field of literature. Many of his philosophical articles and poems have been published in daily newspapers and representative anthologies under the name Hadinaru (NamBiHa). He also composed modern verses, short stories, chutuku, famous Japanese literary forms like haiku, tanka and some Kannada rubai similar to Persian literary forms. He has received commendations from numerous organizations for his contributions to the development of literature.

ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಶಿಕ್ಷಕ ನಂದೀಶ ಬಿ ಅವರಿಗೆ ರಾಜ್ಯ ಪ್ರಶಸ್ತಿ ಮೈಸೂರು, ಸಪ್ಟೆಂಬರ್ 28: ರಾಷ್ಟ್ರೋತ್ಥನ ವಿದ್ಯಾಕೇಂದ್ರ, ವಿಜಯನಗರದ ಕನ್ನಡ ಅಧ್ಯಾಪಕರಾದ ನಂದೀಶ ಬಿ ಅವರಿಗೆ ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಸಂಘ(ರಿ) ಇವರ 19 ವರ್ಷಗಳ ಶೈಕ್ಷಣಿಕ ಕ್ಷೇತ್ರದ ಸಾಧನೆಯನ್ನು ಗುರುತಿಸಿ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸನ್ಮಾನಿಸಿತು. ಅವರ 19 ವರ್ಷಗಳ ಬೋಧನಾ ವೃತ್ತಿಯಲ್ಲಿ ಎಡಬಿಡದೆ ಶೇಕಡಾ 100 ಫಲಿತಾಂಶ ನೀಡಿದ್ದಲ್ಲದೇ, ಪ್ರಾರಂಭದ 7 ವರ್ಷಗಳು ನಿರಂತರವಾಗಿ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ಹಲವು ವಿದ್ಯಾರ್ಥಿಗಳು 125/125 ಅಂಕ ಪಡೆದಿರುತ್ತಾರೆ. ಉಳಿದ ವಿದ್ಯಾರ್ಥಿಗಳು ಸಹ 125ಕ್ಕೆ 100ಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರುತ್ತಾರೆ. ತದನಂತರ 11 ವರ್ಷಗಳ ಕಾಲ ಸಿ.ಬಿ.ಎಸ್.ಇ. ಶಾಲೆಯಲ್ಲಿಯೂ 100 ಅಂಕಗಳಿಗೆ 90 ಅಂಕಗಳಿಗಿಂತ ಕಡಿಮೆ ಇಲ್ಲದ ಫಲಿತಾಂಶ ಪಡೆಯಲು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಿರುತ್ತಾರೆ. ಮಾತ್ರವಲ್ಲದೇ ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷಾಭಿಮಾನ ಮತ್ತು ಸಾಹಿತ್ಯಾಸಕ್ತಿ ಮೂಡಿಸುವಲ್ಲಿ ಕಂಡ ಯಶಸ್ಸನ್ನು ಗಮನಿಸಿ ತರೀಕೆರೆಯ ಕೀರ್ತಿ ಪ್ರಕಾಶನವು 2007ರಲ್ಲಿ ‘ಕನ್ನಡ ಕಣ್ಮಣಿ’ ಎಂಬ ಬಿರುದನ್ನು ನೀಡಿ ಗೌರವಿಸಿತ್ತು. ಈ ಎಲ್ಲ ಅಂಶಗಳನ್ನು ಪರಿಗಣಿಸಿದ ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಸಂಘವು ನಂದೀಶ ಬಿ ಅವರಿಗೆ ದಿನಾಂಕ 28/09/2024 ರಂದು ಬೆಂಗಳೂರಿನ ಜ್ಞಾನ ಭಾರತಿ ವಿಶ್ವವಿದ್ಯಾಲಯದ ಆವರಣದಲ್ಲಿರುವ ಪ್ರೊ॥ ಕೆ ವೆಂಕಟಗಿರಿಗೌಡ ಸ್ಮಾರಕ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಮಾಡಿತು. ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಪ್ರಮಾಣ ಪತ್ರ, ಸ್ಮರಣಿಕೆ ಹಾಗೂ 2000 ರೂಪಾಯಿಗಳ ನಗದನ್ನು ನೀಡಿ ಗೌರವಿಸಲಾಯಿತು. ನಂದೀಶ ಬಿ ರವರು ಸಾಹಿತ್ಯ ಕ್ಷೇತ್ರದಲ್ಲಿಯೂ ಸಕ್ರಿಯವಾಗಿದ್ದು ನಂದೀಶ ಬಿ. ಹದಿನಾರು (ನಂಬಿಹ) ಎಂಬ ಹೆಸರಿನಿಂದ ದಿನ ಪತ್ರಿಕೆಗಳಲ್ಲಿ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಇವರ ಹಲವು ವೈಚಾರಿಕ ಲೇಖನಗಳು.

Scroll to Top