Mysuru, Aug. 27-29: ‘Gauri-Ganesh Festival and National Sports Day’ program was celebrated herein Rashtrotthana Vidya Kendra – Vijayanagar. The program was inaugurated by the children with the praise of Ganapati. On 27-8-25, the installation of Vinayaka was followed by three days of worship. Then on 29-8-25, along with all the worship activities, the Ganapati Visarjan program was meaningfully performed with the singing of the school’s Ghosh team and children’s dance. The children sang devotional songs and explained the importance and significance of the program.

ಮೈಸೂರು, ಆ. 27-29: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ‘ಗೌರಿ-ಗಣೇಶ ಹಬ್ಬ ಮತ್ತು ರಾಷ್ಟ್ರೀಯ ಕ್ರೀಡಾ ದಿನಾಚರಣೆ’ ಕಾರ್ಯಕ್ರಮವನ್ನು ಆಚರಿಸಲಾಯಿತು.  ಮಕ್ಕಳು ಗಣಪತಿ ಸ್ತುತಿ ಮಾಡುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.  ದಿನಾಂಕ 27-8-25ರಂದು ವಿನಾಯಕನ ಪ್ರತಿಷ್ಠಾಪನೆ ಮಾಡುವುದರೊಂದಿಗೆ ಮೂರು ದಿನಗಳ ಕಾಲ ಪೂಜಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ದಿನಾಂಕ 29-8-25ರಂದು ಸಕಲ ಪೂಜಾ ಕಾರ್ಯಗಳೊಂದಿಗೆ ಶಾಲೆಯ ಘೋಷ್ ತಂಡದ ಗಾಯನದೊಂದಿಗೆ, ಮಕ್ಕಳ ನೃತ್ಯದೊಂದಿಗೆ ಗಣಪತಿ ವಿಸರ್ಜನೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನೆರವೇರಿಸಲಾಯಿತು. ಮಕ್ಕಳು ಕಾರ್ಯಕ್ರಮದ ಮಹತ್ವ, ಪ್ರಾಮುಖ್ಯತೆ ತಿಳಿಸುವುದರೊಂದಿಗೆ ಭಕ್ತಿಗೀತೆಗಳನ್ನು ಹಾಡಿದರು.