






















































Mysuru, Aug. 15: The 80th Independence Day was celebrated at Rashtrotthana Vidya Kendra – Vijayanagar.
- Sri Mathanda R Ayyappa graced the program.
- After the guest address, the students sang the Vande Mataram song, followed by the hoisting of the flag and the singing of the national anthem. The channel inspection and the procession of the students took place.
- A disguise performance was performed by the students of the Gokulam section, an attractive performance by the Ghosh team and a mass rehearsal by the students of classes 1 and 2.
- The students sang patriotic songs and performed a dance performance that inspired patriotism.
- The students of classes 3 to 5 performed a mass exercise.
- A group of students spoke in a unique style and explained the importance of Independence Day.
- The students performed yoga and karate.
- Prizes were distributed to the students who achieved success in NCC and sports competitions.
- In his inspiring speech, the Chief Guest imparted a valuable message to the students about the importance of freedom, unity of the country, discipline, sense of duty, and patriotism.
ಮೈಸೂರು, ಆ. 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ 80ನೆಯ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
- ಮುಖ್ಯ ಅತಿಥಿಗಳಾದ ಶ್ರೀ ಮಾತಂಡ ಆರ್ ಅಯ್ಯಪ್ಪ ಅವರು ಆಗಮಿಸಿದ್ದರು.
- ಅತಿಥಿ ಪ್ರಣಾಮದ ಬಳಿಕ ವಿದ್ಯಾರ್ಥಿಗಳು ವಂದೇ ಮಾತರಂ ಗೀತೆಯನ್ನು ಹಾಡಿದ ನಂತರ ಧ್ವಜಾರೋಹಣ ಮತ್ತು ರಾಷ್ಟ್ರಗೀತೆಯ ಗಾಯನ ನಡೆಯಿತು. ವಾಹಿನಿ ಪರಿಶೀಲನೆ ಹಾಗೂ ವಿದ್ಯಾರ್ಥಿಗಳ ಪಥಸಂಚಲನದ ನಡೆಯಿತು.
- ಗೋಕುಲಂ ವಿಭಾಗದ ವಿದ್ಯಾರ್ಥಿಗಳಿಂದ ಛದ್ಮವೇಷ ಪ್ರದರ್ಶನ, ಘೋಷ್ ತಂಡದ ಆಕರ್ಷಕ ಪ್ರದರ್ಶನ ಹಾಗೂ 1 ಮತ್ತು 2ನೆಯ ತರಗತಿಗಳ ವಿದ್ಯಾರ್ಥಿಗಳ ಸಾಮೂಹಿಕ ತಾಲೀಮನ್ನು ಪ್ರದರ್ಶಿಸಲಾಯಿತು.
- ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡುವುದಲ್ಲದೆ ಮತ್ತು ದೇಶಭಕ್ತಿಯನ್ನು ಪ್ರೇರೇಪಿಸುವ ನೃತ್ಯ ಪ್ರದರ್ಶನವು ಮೂಡಿಬಂದವು.
- 3ರಿಂದ 5ನೆಯ ತರಗತಿಯ ವಿದ್ಯಾರ್ಥಿಗಳು ಸಾಮೂಹಿಕ ವ್ಯಾಯಾಮ ಪ್ರದರ್ಶಿಸಿದರು.
- ವಿದ್ಯಾರ್ಥಿಗಳ ತಂಡವೊಂದು ವಿನೂತನ ಶೈಲಿಯಲ್ಲಿ ಸಂಭಾಷಣೆ ಮಾಡುತ್ತಾ ಸ್ವಾತಂತ್ರ್ಯ ದಿನದ ಮಹತ್ವವನ್ನು ತಿಳಿಸಿದರು.
- ವಿದ್ಯಾರ್ಥಿಗಳು ಯೋಗ ಪ್ರದರ್ಶನ ಹಾಗೂ ಕರಾಟೆ ಪ್ರದರ್ಶನಗಳು ನಡೆದವು.
- ಎನ್.ಸಿ.ಸಿ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
- ಮುಖ್ಯ ಅತಿಥಿಗಳು ತಮ್ಮ ಪ್ರೇರಣಾದಾಯಕ ಭಾಷಣದಲ್ಲಿ ಸ್ವಾತಂತ್ರ್ಯದ ಮಹತ್ವ, ದೇಶದ ಏಕತೆ, ಶಿಸ್ತು, ಕರ್ತವ್ಯಪ್ರಜ್ಞೆ ಮತ್ತು ರಾಷ್ಟ್ರಭಕ್ತಿಯ ಕುರಿತು ವಿದ್ಯಾರ್ಥಿಗಳಿಗೆ ಅಮೂಲ್ಯ ಸಂದೇಶ ನೀಡಿದರು.
Tagged Rashtrotthana, RashtrotthanaVidyaKendra, RVK, RVKCBSE