



































































Mysuru, May 31: The program of Aksharabhyas and Vidyarambha was held at Rashtrotthana Vidya Kendra – Vijayanagar.
• The program was started by performing Navagraha Homa, Gana Homa and Saraswati Homa in the morning.
• Pujya Swamini Varadananda Saraswati of Arsha Vidya Gurukul, who arrived as the chief guest for the program, was welcomed with a full kumbha welcome with Veda Ghosha.
• After offering the full homa, the assembly function was started.
Pradhanacharya Sri Shivaraj N. played the introductory words.
• With the blessings and guidance of Pujya Swamini Varadananda Saraswati, the Aksharabhyas and Vidyarambha were completed.
• Swamini gave his blessing and explained the concept of Sanatan. He also said, “Parents should join hands in building the personality of their children, rather than relying solely on teachers.”
ಮೈಸೂರು, ಮೇ 31: ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ – ವಿಜಯನಗರದಲ್ಲಿ ಅಕ್ಷರಾಭ್ಯಾಸ ಮತ್ತು ವಿದ್ಯಾರಂಭದ ಕಾರ್ಯಕ್ರಮವು ಜರುಗಿತು.
• ಪ್ರಾತಃಕಾಲದಲ್ಲಿ ನವಗ್ರಹ ಹೋಮ, ಗಣಹೋಮ ಮತ್ತು ಸರಸ್ವತಿಹೋಮ ಮಾಡುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು.
• ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆರ್ಷ ವಿದ್ಯಾ ಗುರುಕುಲದ ಪೂಜ್ಯ ಸ್ವಾಮಿನಿ ವರದಾನಂದ ಸರಸ್ವತಿ ಅವರನ್ನು ವೇದಘೋಷದೊಂದಿಗೆ ಪೂರ್ಣಕುಂಭ ಸ್ವಾಗತ ಕೋರುತ್ತ ಬರಮಾಡಿಕೊಳ್ಳಲಾಯಿತು.
• ಹೋಮಕ್ಕೆ ಪೂರ್ಣಾಹುತಿ ನೀಡಿದ ಅನಂತರ ಸಭಾ ಕಾರ್ಯಕ್ಕೆ ಚಾಲನೆ ನೀಡಲಾಯಿತು.
• ಪ್ರಧಾನಾಚಾರ್ಯರಾದ ಶ್ರೀ ಶಿವರಾಜ್.ಎನ್ ರವರು ಪ್ರಾಸ್ತಾವಿಕ ನುಡಿಗಳನ್ನು ಆಡಿದರು.
• ಪೂಜ್ಯ ಸ್ವಾಮಿನಿ ವರದಾನಂದ ಸರಸ್ವತಿರವರ ಆಶೀರ್ವಾದದೊಂದಿಗೆ ಮತ್ತು ಮಾರ್ಗದರ್ಶನದೊಂದಿಗೆ ಅಕ್ಷರಾಭ್ಯಾಸ ಮತ್ತು ವಿದ್ಯಾರಂಭವು ನೆರವೇರಿತು.
• ಸ್ವಾಮಿನಿಯವರು ಆಶೀರ್ವಚನ ನೀಡುತ್ತಾ ಸನಾತನ ಪರಿಕಲ್ಪನೆಯನ್ನು ಅರ್ಥೈಸಿಸಿದರು. ಅಲ್ಲದೆ “ಮಕ್ಕಳ ವ್ಯಕ್ತಿತ್ವದ ನಿರ್ಮಾಣದಲ್ಲಿ ಕೇವಲ ಶಿಕ್ಷಕರನ್ನು ಮಾತ್ರ ಅವಲಂಬಿಸದೆ ಪೋಷಕರು ಕೈ ಜೋಡಿಸಬೇಕು” ಎಂದರು.