Mysuru, Apr. 14: The 135th birth anniversary of the architect of the Constitution, Dr. B.R. Ambedkar, was celebrated herein Rashtrotthana Vidya Kendra – Vijayanagar. Teacher Smt. Uma Maheshwari explained the life achievements of Ambedkar in a descriptive manner and explained the significance of his birth anniversary celebrations. The school principal, Sri Shivaraj N., opined that the birth anniversary celebrations would be meaningful only when Ambedkar’s ideals were imbibed.

ಮೈಸೂರು, ಏ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ರವರ 135ನೆಯ ಜಯಂತಿಯನ್ನು ಆಚರಿಸಲಾಯಿತು. ಶಿಕ್ಷಕಿ ಶ್ರೀಮತಿ ಉಮಾ ಮಹೇಶ್ವರಿಯವರು ಅಂಬೇಡ್ಕರ್ ಅವರ ಜೀವನ ಸಾಧನೆಯನ್ನು ವರ್ಣನಾತ್ಮಕವಾಗಿ ವಿವರಿಸುತ್ತ ಅವರ ಜಯಂತಿ ಆಚರಣೆಯ ಸಾರ್ಥಕತೆಯನ್ನು ತಿಳಿಸಿದರು.  ಶಾಲೆಯ ಪ್ರಧಾನಾಚಾರ್ಯರಾದ ಶ್ರೀ ಶಿವರಾಜ್ ಎನ್. ರವರು ಅಂಬೇಡ್ಕರ್ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಾಗ ಮಾತ್ರ ಜಯಂತಿ ಆಚರಣೆಯು ಅರ್ಥಪೂರ್ಣವಾಗುವುದೆಂದು ಅಭಿಪ್ರಾಯ ಪಟ್ಟರು.