Mysuru, Mar. 14: Sri Satyanarayana Puja was performed at Rashtrotthana Vidya Kendra – Vijayanagar. The puja of Sriman Satyanarayana Swamy, which began with the hymn of Vighna Vinashaka Vighneshwara, the destroyer of obstacles, was performed in a traditional and ritualistic manner. Later, various students provided music, bhajans and artistic services. Later, Sri Vidyadhara, the Bouddik of the Mysuru branch of the Rashtriya Swayamsevak Sangh, in his guest address, said in a narrative style, “The essence and power of the Indian land are rooted in the puja rituals that we have been performing since time immemorial.” Prasad was distributed after the Mahamangalaarti.

ಮೈಸೂರು, ಮಾ. 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಶ್ರೀ ಸತ್ಯನಾರಾಯಣ ಪೂಜೆಯು ನೆರವೇರಿತು. ವಿಘ್ನ ವಿನಾಶಕ ವಿಘ್ನೇಶ್ವರನ ಸ್ತುತಿಯೊಂದಿಗೆ ಪ್ರಾರಂಭವಾದ ಶ್ರೀಮನ್ ಸತ್ಯನಾರಾಯಣ ಸ್ವಾಮಿಯ ಪೂಜಾ ಕೈಂಕರ್ಯವು ಸಂಪ್ರದಾಯಬದ್ಧ ಶಾಸ್ತ್ರೋಕ್ತವಾಗಿ ನಡೆಯಿತು. ತದನಂತರ ವಿವಿಧ ವಿದ್ಯಾರ್ಥಿಗಳು ಸಂಗೀತ, ಭಜನೆ ಮತ್ತು ಕಲಾ ಸೇವೆಯನ್ನು ನೀಡಿದರು. ಅನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೈಸೂರು ವಿಭಾಗದ ಬೌದ್ಧಿಕ್ ಪ್ರಮುಖರಾದ ಶ್ರೀ. ವಿದ್ಯಾಧರ ಅವರು ತಮ್ಮ ಅತಿಥಿ ಭಾಷಣದಲ್ಲಿ “ಭಾರತೀಯ ನೆಲದ ಸತ್ವ ಮತ್ತು ಶಕ್ತಿಯು ನೆಲೆ ನಿಂತಿರುವುದು ನಾವು ಅನಾದಿ ಕಾಲದಿಂದ ಮಾಡುತ್ತಾ ಬಂದಿರುವ ಪೂಜಾ ಕೈಂಕರ್ಯ ಆಚರಣೆಗಳೇ ಕಾರಣ” ಎಂದು ಕಥಾನಕ ಶೈಲಿಯಲ್ಲಿ ಹೇಳಿದರು. ಮಹಾಮಂಗಳಾರತಿಯ ನಂತರ ಪ್ರಸಾದ ವಿತರಣೆ ಮಾಡಲಾಯಿತು.