




























Mysuru, Jan. 11: A ‘Rashtrotsava’ was celebrated herein Rashtrotthana Vidya Kendra – Vijayanagar with the theme ‘Ek Bharat Shreshtha Bharat’. Sri Vinayak P. Hegde, Head of Mysuru Infosys DC, and Sri Na. Dinesh Hegde, General Secretary of the Parishat, were the chief guests. Sri Na. Dinesh Hegde, speaking, explained the importance of R.V.K. schools, the concept of nation building through various programs of the Parishad and examples. Chief guest Sri Vinayak P Hegde, speaking, expressed his appreciation for the culture, education and personality development of the R.V.K. school. Children from all classes presented various dance forms reflecting the diverse cultures of India with the theme ‘Ek Bharat Shreshtha Bharat’.
ಮೈಸೂರು, ಜ.11: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ‘ಏಕ ಭಾರತ್ ಶ್ರೇಷ್ಠ ಭಾರತ್’ ಎಂಬ ವಿಚಾರವನ್ನು ಒಳಗೊಂಡ ‘ರಾಷ್ಟ್ರೋತ್ಸವ’ವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಮೈಸೂರು ಇನ್ಫೋಸಿಸ್ ಡಿ.ಸಿ ಮುಖ್ಯಸ್ಥರಾದ ಶ್ರೀ ವಿನಾಯಕ ಪಿ ಹೆಗಡೆ, ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗಡೆ ಅವರು ಆಗಮಿಸಿದ್ದರು. ಶ್ರೀ ನಾ. ದಿನೇಶ್ ಹೆಗಡೆ ಅವರು ಮಾತನಾಡುತ್ತ ಆರ್.ವಿ.ಕೆ ಶಾಲೆಗಳ ಪ್ರಾಮುಖ್ಯತೆ, ಪರಿಷತ್ತಿನ ವಿವಿಧ ಕಾರ್ಯಕ್ರಮಗಳನ್ನು ಉದಾಹರಣೆಗಳ ಮೂಲಕ ರಾಷ್ಟ್ರ ನಿರ್ಮಾಣ ಪರಿಕಲ್ಪನೆಯನ್ನು ತಿಳಿಸಿದರು. ಮುಖ್ಯ ಅತಿಥಿಗಳಾದ ಶ್ರೀ ವಿನಾಯಕ ಪಿ ಹೆಗಡೆ ಅವರು ಮಾತನಾಡುತ್ತ ಆರ್.ವಿ.ಕೆ. ಶಾಲೆಯ ಸಂಸ್ಕೃತಿ, ಶಿಕ್ಷಣ ಮತ್ತು ವ್ಯಕ್ತಿತ್ವ ನಿರ್ಮಾಣದ ರೀತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಎಲ್ಲಾ ತರಗತಿಯ ಮಕ್ಕಳು ‘ಏಕ ಭಾರತ್ ಶ್ರೇಷ್ಠ ಭಾರತ್’ ಎಂಬ ವಿಚಾರವನ್ನು ಒಳಗೊಂಡ ಭಾರತದ ವಿವಿಧ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವಿವಿಧ ನೃತ್ಯ ರೂಪಕಗಳನ್ನು ಪ್ರಸ್ತುತಪಡಿಸಿದರು.