78th Independence Day in RVK – Vijaynagar

Home > News & Events >78th Independence Day in RVK – Vijaynagar

“The values of discipline, moderation, punctuality, and patriotism hold significant importance for students. Future generations ought to recognize the significance of our liberty, our solidarity, and our accountability”: Sri Hanumanthachar Joshi: Independence Day, RVK – Vijayanagar.

Mysuru, Aug 15: The 78th Independence Day was celebrated herein Rashtrotthana Vidya Kendra – Vijayanagar. Sri Hanumanthachar Joshi of Sarada Vilas College of Pharmacy graced the program. The school premises were decorated with tricolour buntings, flags and rangolis. Bharatambe, Mahatma Gandhiji and Dr. B. R. Ambedkar’s portraits were garlanded. The chief guest conducted the flag hoisting ceremony.The students from various teams within the school participated in a procession accompanied by the rhythmic performance of the School Ghosh team. The Ghosh performance, along with the cultural programs presented by the students in celebration of patriotism, captivated the attention of all attendees.Ex-serviceman Sri Kariappa P. P. was felicitated in the program.

“ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ಸಮಯ ಪಾಲನೆ ಹಾಗೂ ದೇಶಭಕ್ತಿಯು ಬಹಳ ಮುಖ್ಯ. ಭವಿಷ್ಯದ ಮಕ್ಕಳು ನಮ್ಮ ಸ್ವಾತಂತ್ರ್ಯದ ಮೌಲ್ಯ, ನಮ್ಮ ಏಕತೆ ಹಾಗೂ ಜವಾಬ್ದಾರಿಯನ್ನು ನೆನಪಿನಲ್ಲಿಟ್ಟುಕೊಳ್ಳಬೇಕು”: ಶ್ರೀ ಹನುಮಂತಾಚಾರ್ ಜೋಶಿ: ಸ್ವಾತಂತ್ರ್ಯ ದಿನಾಚರಣೆ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ವಿಜಯನಗರ.

ಮೈಸೂರು, ಆಗಸ್ಟ್ 15: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ 78ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಶಾರದಾ ವಿಲಾಸ್ ಕಾಲೇಜ್ ಆಫ್ ಫಾರ್ಮಸಿಯ ಶ್ರೀ ಹನುಮಂತಾಚಾರ್ ಜೋಶಿ ಅವರು ಅತಿಥಿಗಳಾಗಿ ಆಗಮಿಸಿದ್ದರು.ಶಾಲೆಯ ಆವರಣವು ತಿರಂಗಾ ಬಂಟಿಂಗ್ಸ್, ದ್ವಜ ಹಾಗೂ ರಂಗೋಲಿಗಳಿಂದ ಅಲಂಕರಿಸಲ್ಪಟ್ಟಿತ್ತು. ಮುಖ್ಯ ಅತಿಥಿಗಳಿಂದ ಧ್ವಜಾರೋಹಣದ ಮೂಲಕ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಭಾರತಾಂಬೆ, ರಾಷ್ಟಪಿತ ಗಾಂಧಿಜೀ ಹಾಗೂ ಸಂವಿಧಾನ ಶಿಲ್ಪಿ ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಲಾಯಿತು. ಶಾಲಾ ಘೋಷ್ ತಂಡದ ತಾಳದೊಂದಿಗೆ ಶಾಲೆಯ ವಿವಿಧ ತಂಡಗಳ ವಿದ್ಯಾರ್ಥಿಗಳು ಪಥಸಂಚಲನವನ್ನು ನೆರವೇರಿಸಿ ಕೊಟ್ಟರು. ಘೋಷ್ ಪ್ರದರ್ಶನ ಹಾಗೂ ದೇಶಭಕ್ತಿಯನ್ನು ಮೆರೆಯುವಂತಹ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನ ಸೆಳೆದವು.ಕಾರ್ಯಕ್ರಮದಲ್ಲಿ ಮಾಜಿ ಸೈನಿಕರಾದ ಶ್ರೀ ಕಾರ್ಯಪ್ಪ ಪಿ.ಪಿ. ಅವರನ್ನು ಸನ್ಮಾನಿಸಲಾಯಿತು.

Scroll to Top