Mysuru, October 12: Rashtrotthana Vidya Kendra – Vijayanagar has launched admissions for the year 2025-26. Sri Jayanna, Secretary, Rashtrotthana Vidya Kendra – Davanagere and the administrative head of North Zone, arrived as Chief Guest and explained in detail the specialities of the education system of Rashtrotthana Vidya Kendra. Smt. Roopa N.S., coordinator of Arkavathy Rashtrotthana Vidya Kendra; Vijayanagar Branch Principal Sri Shivraj N.; Administrators Sri Chandrasekhar K. L.; and teaching-non-teaching staff, some parents were present. Online and direct application submission was also launched. On this occasion, it was special that three children from the same family received admission applications.
ಮೈಸೂರು, ಅಕ್ಟೋಬರ್ 12: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ, ವಿಜಯನಗರದಲ್ಲಿ 2025-26 ನೇ ಸಾಲಿನ ಪ್ರವೇಶಾತಿಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಕಾರ್ಯದರ್ಶಿಗಳು ಹಾಗೂ ಉತ್ತರ ವಲಯದ ಆಡಳಿತ ಪ್ರಮುಖರು ಆದ ಶ್ರೀ ಜಯಣ್ಣ ಅವರು ಆಗಮಿಸಿದ್ದು ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳ ಶಿಕ್ಷಣ ವ್ಯವಸ್ಥೆಯ ವಿಶೇಷತೆಯನ್ನು ಸವಿವರವಾಗಿ ತಿಳಿಸಿದರು. ಕಾರ್ಯಕ್ರಮದಲ್ಲಿ ಥಣಿಸಂದ್ರ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಸಂಯೋಜಕರಾದ ಶ್ರೀಮತಿ ರೂಪ ಎನ್. ಎಸ್, ವಿಜಯನಗರ ಶಾಖೆಯ ಪ್ರಧಾನಾಚಾರ್ಯರಾದ ಶಿವರಾಜ್ ಎನ್., ಆಡಳಿತಾಧಿಕಾರಿಗಳಾದ ಚಂದ್ರಶೇಖರ್ ಕೆ. ಎಲ್. ಹಾಗೂ ಬೋಧಕ-ಬೋಧಕೇತರ ವೃಂದದವರು, ಕೆಲವು ಪೋಷಕರು ಉಪಸ್ಥಿತರಿದ್ದರು. ಅಂತರ್ಜಾಲದ ಮೂಲಕ ಮತ್ತು ನೇರ ಅರ್ಜಿ ಸಲ್ಲಿಕೆಗೂ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಒಂದೇ ಕುಟುಂಬದ ಮೂರು ಮಕ್ಕಳಿಗೆ ಪ್ರವೇಶಾತಿ ಅರ್ಜಿ ಪಡೆದದ್ದು ವಿಶೇಷವಾಗಿತ್ತು.