The Oath-taking Ceremony and Hindu Samrajyotsava in RVK – Vijayanagar

Mysuru, June 8: The oath-taking ceremony and Hindu Samrajyotsava were celebrated herein Rashtrotthana Vidya Kendra – Vijayanagar.
Sri P. Chandan, Officer of Mysuru Regional Fire Service, graced the program.
Smt. Mamata explained the need and importance of the Council of Ministers in the school.
Sri Harish Shanai, a member of the school’s steering committee, administered the oath-taking ceremony and received the power of attorney for the students who won the elections.
Anish, a student of class 6 of our school, dressed as ‘Shivaji Maharaj’, spoke.
Sri Harish Shanai honoured and distributed prizes to the students who won the state-level yoga and swimming competitions.
The school’s Ghosh team played melodious Ghosh compositions under the guidance of Sri Mahendra Prasad.

ಮೈಸೂರು, ಜೂ. 8: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ವಿದ್ಯಾರ್ಥಿ ಮಂತ್ರಿ ಮಂಡಲದ ಸದಸ್ಯರುಗಳಿಗೆ ಪ್ರತಿಜ್ಞಾವಿಧಿ ಕಾರ್ಯಕ್ರಮ ಮತ್ತು ಹಿಂದೂ ಸಾಮ್ರಾಜ್ಯ ದಿನವನ್ನು ಆಚರಿಸಲಾಯಿತು.
ಮೈಸೂರು ಪ್ರಾದೇಶಿಕ ಅಗ್ನಿಶಾಮಕದಳದ ಅಧಿಕಾರಿಯಾದ ಶ್ರೀ ಪಿ. ಚಂದನ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಶಾಲೆಯಲ್ಲಿ ಮಂತ್ರಿಮಂಡಲದ ಅವಶ್ಯಕತೆ ಮತ್ತು ಮಹತ್ವವನ್ನು ಶ್ರೀಮತಿ ಮಮತಾ ಅವರು ತಿಳಿಸಿಕೊಟ್ಟರು.
ಚುನಾವಣೆಯಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಶಾಲೆಯ ಸಂಚಾಲನಾ ಸಮಿತಿಯ ಸದಸ್ಯರಾದ ಶ್ರೀ ಹರೀಶ್ ಶನೈ ರವರು ಪ್ರತಿಜ್ಞಾವಿಧಿ ಮತ್ತು ಅಧಿಕಾರ ಸ್ವೀಕಾರ ಕಾರ್ಯವನ್ನು ನೆರವೇರಿಸಿದರು.
ನಂತರ ನಮ್ಮ ಶಾಲೆಯ 6ನೆಯ ತರಗತಿಯ ವಿದ್ಯಾರ್ಥಿಯಾದ ಅನಿಶ್ ‘ಶಿವಾಜಿ ಮಹಾರಾಜರ’ ಛದ್ಮವೇಷ ಧರಿಸಿ ಮಾತನಾಡಿದನು.
ರಾಜ್ಯ ಮಟ್ಟದ ಯೋಗ ಮತ್ತು ಈಜು ಸ್ಪರ್ಧೆಯಲ್ಲಿ ಜಯಗಳಿಸಿದ ನಮ್ಮ ಶಾಲೆಯ ವಿದ್ಯಾರ್ಥಿಗಳಿಗೆ ಶ್ರೀ ಹರೀಶ್ ಶನೈ ರವರು ಬಹುಮಾನ ವಿತರಿಸಿ ಗೌರವಿಸಿದರು.
ಶಾಲೆಯ ಘೋಷ್ ತಂಡದವರು ಶ್ರೀ ಮಹೇಂದ್ರ ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಸುಮಧುರವಾದ ಘೋಷ್ ರಚನೆಗಳನ್ನು ನುಡಿಸಲಾಯಿತು.

Scroll to Top