




















Mysuru, Jan. 26: Republic Day was celebrated herein Rashtrotthana Vidya Kendra – Vijayanagar.
After the flag hoisting, a procession and a Ghose were performed.
Saanvi L. M. and Pranav P. S. Hiremath of class 3 and Saanvi L. Gowda of class 7 spoke about the importance of the day in English and Kannada respectively.
The students sang a patriotic song. A short drama was performed on Article 370 of the Constitution. Then the dignitaries congratulated the students who brought glory to the school by achieving at the district, state and national levels.
Former MP, Sri Pratap Singh, who arrived as the chief guest, said, “The Constitution has given us the rights to raise our voices against injustice.” They told the students about the priority that should be given to the all-round development of children through a short story. They also gave motivational speeches to achieve in various fields.
ಮೈಸೂರು, ಜ. 26: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಧ್ವಜಾರೋಹಣದ ಬಳಿಕ ಪಥಸಂಚಲನ ಮತ್ತು ಘೋಷ್ ಪ್ರದರ್ಶಿಸಲಾಯಿತು.
3ನೆಯ ತರಗತಿಯ ಸಾನ್ವಿ ಎಲ್. ಎಂ. ಮತ್ತು ಪ್ರಣವ್ ಪಿ.ಎಸ್ ಹಿರೇಮಠ್ ಇಂಗ್ಲಿಷಿನಲ್ಲಿಯೂ, 7ನೆಯ ತರಗತಿಯ ಸಾನ್ವಿ ಎಲ್. ಗೌಡಳು ಕನ್ನಡದಲ್ಲಿಯೂ ದಿನದ ಮಹತ್ವವನ್ನು ಹೇಳಿದರು.
ವಿದ್ಯಾರ್ಥಿಗಳ ದೇಶಭಕ್ತಿಗೀತೆ ಹಾಡಿದರು. ಸಂವಿಧಾನದ 370ನೆಯ ವಿಧಿಯನ್ನು ಕುರಿತು ಕಿರು ನಾಟಕವನ್ನು ಪ್ರದರ್ಶಿಸಲಾಯಿತು. ನಂತರ ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಗಣ್ಯರು ಅಭಿನಂದಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಸಂಸದ ಶ್ರೀಯುತ ಪ್ರತಾಪ್ ಸಿಂಹರವರು “ಅನ್ಯಾಯದ ವಿರುದ್ಧ ಧ್ವನಿ ಎತ್ತಲು ಸಂವಿಧಾನವು ನಮಗೆ ಹಕ್ಕುಗಳನ್ನು ನೀಡಿದೆ.” ಎಂದು ಹೇಳುತ್ತಾ ಸಣ್ಣಕಥೆಯೊಂದರ ಮೂಲಕ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ನೀಡಬೇಕಿರುವ ಆದ್ಯತೆಯನ್ನು ತಿಳಿಸಿದರು. ಮಾತ್ರವಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈಯುವಂತೆ ಪ್ರೇರಣಾತ್ಮಕ ನುಡಿಗಳ ಕಿವಿಮಾತು ಹೇಳಿದರು.