










Mysuru, Feb. 5: Rathasaptami was celebrated herein Rashtrotthana Vidya Kendra – Vijayanagar. On the occasion of Rathasaptami, a seven-day yoga week of Surya Namaskar was organized, and the week was also held under the guidance of yoga teacher Sri Suraj. On the last day, international Yoga Guru Dr. P. N. Ganesh Kumar arrived as the Chief Guest, blew the Shankha and spread the benefits of Surya Namaskar and the message of yoga. Teacher Sri Nandish B. explained the positive reasons for the Rathasaptami celebration on a scientific basis.
ಮೈಸೂರು, ಫೆ. 5: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ರಥಸಪ್ತಮಿಯನ್ನು ಆಚರಿಸಲಾಯಿತು. ರಥಸಪ್ತಮಿಯ ಪ್ರಯುಕ್ತ ಏಳು ದಿನಗಳ ಕಾಲ ಸೂರ್ಯ ನಮಸ್ಕಾರದ ಯೋಗ ಸಪ್ತಾಹವನ್ನು ಹಮ್ಮಿಕೊಂಡಿದ್ದು, ಯೋಗ ಶಿಕ್ಷಕರಾದ ಶ್ರೀ ಸೂರಜ್ ರವರ ಮಾರ್ಗದರ್ಶನದಲ್ಲಿ ಸಪ್ತಾಹವೂ ಜರುಗಿತು. ಕಡೆಯ ದಿನ ಅಂತರರಾಷ್ಟ್ರೀಯ ಯೋಗ ಗುರು ಡಾ. ಪಿ. ಎನ್. ಗಣೇಶ್ ಕುಮಾರ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದು, ಶಂಖ ನಾದ ಮಾಡಿ ಸೂರ್ಯ ನಮಸ್ಕಾರದ ಲಾಭಗಳನ್ನೂ, ಯೋಗ ಸಂದೇಶವನ್ನು ಸಾರಿದರು. ಶಿಕ್ಷಕರಾದ ನಂದೀಶ ಬಿ. ರಥ ಸಪ್ತಮಿ ಆಚರಣೆಯ ಧನಾತ್ಮಕ ಕಾರಣಗಳನ್ನು ವೈಜ್ಞಾನಿಕ ತಳಹದಿಯಲ್ಲಿ ವಿವರಿಸಿದರು.
ಮೈಸೂರು, ಜ.10: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಮಕರ ಸಂಕ್ರಾಂತಿ ಮತ್ತು ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು. ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಗೋಪೂಜೆಯನ್ನು ಮಾಡಿ ಫಲ ತಾಂಬೂಲದ ನೈವೇದ್ಯವನ್ನು ಮಾಡಲಾಯಿತು. ಜೊತೆಗೆ ಹೊಸ ಮಡಿಕೆ ಮತ್ತು ಒಲೆಯನ್ನು ಪೂಜಿಸಿ ಪೊಂಗಲ್ ಮಾಡಲಾಯಿತು. ವಿದ್ಯಾರ್ಥಿಗಳು ಸಂಕ್ರಾಂತಿಯ ಹಾಗೂ ಸ್ವಾಮಿ ವಿವೇಕಾನಂದರ ಜಯಂತಿಯ ಮಹತ್ತ್ವವನ್ನು ತಿಳಿಸಿದರು. ಸಮೂಹ ಗಾಯನವನ್ನು ಹಾಡಿದರು. ಹಾಗೆಯೇ “ಸುಗ್ಗಿ ಕಾಲ ಹಿಗ್ಗಿ ಬಂದಿತು” ಹಾಡಿಗೆ ನರ್ತಿಸಿದರು. ಮಾತ್ರವಲ್ಲದೆ ಅಮೆರಿಕದ ಚಿಕಾಗೋ ನಗರದಲ್ಲಿ ನಡೆದಂತಹ ಸ್ವಾಮಿ ವಿವೇಕಾನಂದರ ಭಾಷಣದ ಸನ್ನಿವೇಶವನ್ನು ಅಣುಕು ಪ್ರದರ್ಶನ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಎಳ್ಳು ಬೀರಲಾಯಿತು. ಸಿಹಿ ಪೊಂಗಲನ್ನು ಸಹ ಹಂಚಲಾಯಿತು.