




Mysuru, Feb. 14: Saraswati Puja was performed as part of ‘Vasant Panchami’ herein Rashtrotthana Vidya Kendra – Vijayanagar. The puja program was started by praising Saraswati. Under the leadership of students Vishal Akarsh and Samriddh M. K., the Puja Kainkarya was performed by the Principal Sri N. Shivaraj. Parijna Saidut of class 1 performed the Saraswati costume. N., a student of class 5, sang the song ‘Sharade Varade’. In the meantime, Sanskrit Acharya Sri K.S. Nagesh recited the Devi Bhagavatam. The children of Gokul section performed a puppet show. Anagha H. Prasad of class 5 recited the Medha Sukta while performing the aarti. Digant V. of class 6 beautifully explained the significance of the day.
ಮೈಸೂರು, ಫೆ 14: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ‘ವಸಂತ ಪಂಚಮಿ’ಯ ಅಂಗವಾಗಿ ಸರಸ್ವತಿ ಪೂಜೆಯನ್ನು ನೆರವೇರಿಸಲಾಯಿತು. ಸರಸ್ವತಿಯ ವಂದನೆಯನ್ನು ಸ್ತುತಿಸುವ ಮೂಲಕ ಪೂಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿಶಾಲ್ ಆಕರ್ಷ್ ಮತ್ತು ಸಂಮೃದ್ಧ್ ಎಂ. ಕೆ. ಎಂಬ ವಿದ್ಯಾರ್ಥಿಗಳ ಪೌರೋಹಿತ್ಯದಲ್ಲಿ ಪ್ರಧಾನಾಚಾರ್ಯರಾದ ಶ್ರೀ ಎನ್. ಶಿವರಾಜ್ ಅವರು ಪೂಜಾ ಕೈಂಕರ್ಯವನ್ನು ನೆರವೇರಿಸಿದರು. 1ನೇ ತರಗತಿಯ ಪರಿಜ್ಞಾ ಸಾಯಿದತ್ ಸರಸ್ವತಿಯ ವೇಷವನ್ನು ಪ್ರದರ್ಶಿಸಿದಳು. 5ನೆಯ ತರಗತಿಯ ವಿಧಾತ್ರಿ ಎನ್. ‘ಶಾರದೆ ವರದೇ’ ಹಾಡನ್ನು ಹಾಡಿದಳು. ಈ ನಡುವೆ ಸಂಸ್ಕೃತ ಆಚಾರ್ಯರಾದ ಶ್ರೀ ಕೆ.ಎಸ್. ನಾಗೇಶ್ ರವರು ದೇವಿ ಭಾಗವತವನ್ನು ವಾಚನ ಮಾಡಿದರು. ಗೋಕುಲ ವಿಭಾಗದ ಮಕ್ಕಳು ಗೊಂಬೆ ರಂಗಮಂದಿರ ಕಾರ್ಯಕ್ರಮವನ್ನು ಪ್ರದರ್ಶಿಸಿದರು. 5ನೆಯ ತರಗತಿಯ ಅನಘ ಹೆಚ್. ಪ್ರಸಾದಳು ಆರತಿ ಮಾಡುವ ಸಂದರ್ಭದಲ್ಲಿ ಮೇಧಾಸೂಕ್ತವನ್ನು ಪಠಿಸಿದಳು. 6ನೆಯ ತರಗತಿಯ ದಿಗಂತ್.ವಿ ದಿನದ ಮಹತ್ವವನ್ನು ಸೊಗಸಾಗಿ ವಿವರಿಸಿದನು