


Mysuru, Jan. 23: Netaji Subhas Chandra Bose Jayanti was celebrated as ‘Parakram Diwas’ herein Rashtrotthana Vidya Kendra – Vijayanagar.
Teacher Sri Dilip V. M., while talking about the importance of the day, explained Netaji’s patriotism, adventure, and organizational qualities in a simple and beautiful way with examples.
ಮೈಸೂರು, ಜ. 23: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿಯನ್ನು ‘ಪರಾಕ್ರಮ ದಿವಸ’ ಎಂದು ಆಚರಿಸಲಾಯಿತು.
ಶಿಕ್ಷಕಾದ ಶ್ರೀ ದಿಲೀಪ್ ವಿ. ಎಂ.ರವರು ದಿನದ ಮಹತ್ತ್ವವನ್ನು ಹೇಳುತ್ತ, ನೇತಾಜಿಯವರ ದೇಶ ಪ್ರೇಮ, ಸಾಹಸ, ಸಂಘಟನೆ ಗುಣಗಳನ್ನು ಉದಾಹರಣೆ ಸಹಿತ ಸರಳ ಸುಂದರವಾಗಿ ವಿವರಿಸಿದರು.
ಮೈಸೂರು, ಜ.10: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಮಕರ ಸಂಕ್ರಾಂತಿ ಮತ್ತು ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು. ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಗೋಪೂಜೆಯನ್ನು ಮಾಡಿ ಫಲ ತಾಂಬೂಲದ ನೈವೇದ್ಯವನ್ನು ಮಾಡಲಾಯಿತು. ಜೊತೆಗೆ ಹೊಸ ಮಡಿಕೆ ಮತ್ತು ಒಲೆಯನ್ನು ಪೂಜಿಸಿ ಪೊಂಗಲ್ ಮಾಡಲಾಯಿತು. ವಿದ್ಯಾರ್ಥಿಗಳು ಸಂಕ್ರಾಂತಿಯ ಹಾಗೂ ಸ್ವಾಮಿ ವಿವೇಕಾನಂದರ ಜಯಂತಿಯ ಮಹತ್ತ್ವವನ್ನು ತಿಳಿಸಿದರು. ಸಮೂಹ ಗಾಯನವನ್ನು ಹಾಡಿದರು. ಹಾಗೆಯೇ “ಸುಗ್ಗಿ ಕಾಲ ಹಿಗ್ಗಿ ಬಂದಿತು” ಹಾಡಿಗೆ ನರ್ತಿಸಿದರು. ಮಾತ್ರವಲ್ಲದೆ ಅಮೆರಿಕದ ಚಿಕಾಗೋ ನಗರದಲ್ಲಿ ನಡೆದಂತಹ ಸ್ವಾಮಿ ವಿವೇಕಾನಂದರ ಭಾಷಣದ ಸನ್ನಿವೇಶವನ್ನು ಅಣುಕು ಪ್ರದರ್ಶನ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಎಳ್ಳು ಬೀರಲಾಯಿತು. ಸಿಹಿ ಪೊಂಗಲನ್ನು ಸಹ ಹಂಚಲಾಯಿತು.