‘Kavi Samaya’ in RVK – Vijyanagar

Mysuru, Feb. 6: Poet Smt. Vani Subbaiah, who wrote the poem ‘Kadalu’ in the Kannada textbook of Class 2, visited Rashtrotthana Vidya Kendra – Vijayanagar.
She was happy to see children praying during school prayer time. She also performed and sang a poem of ‘Bandipurada Kaadu’, which she had composed, in front of the children. After the program, Smt. Vani Subbaiah recited, sang and interpreted the poem ‘Kadalu’ separately for the children of Class 2.
ಮೈಸೂರು, ಫೆ. 6: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರಕ್ಕೆ 2ನೆಯ ತರಗತಿಯ ಕನ್ನಡ ಪಠ್ಯಪುಸ್ತಕದಲ್ಲಿರುವ ಕವಿತೆ ‘ಕಡಲು’ ಬರೆದ ಕವಯಿತ್ರಿ ಶ್ರೀಮತಿ ವಾಣಿಸುಬ್ಬಯ್ಯನವರು ಭೇಟಿ ನೀಡಿದ್ದರು.
ಶಾಲಾ ಪ್ರಾರ್ಥನೆ ಸಮಯದಲ್ಲಿ ಮಕ್ಕಳ ಪ್ರಾರ್ಥನೆಗೆ ಸಂತೋಷಪಟ್ಟರು. ಜೊತೆಗೆ ತಾವೇ ರಚಿಸಿದ ‘ಬಂಡೀಪುರದ ಕಾಡು’ ಪದ್ಯವನ್ನು ಮಕ್ಕಳ ಮುಂದೆ ಅಭಿನಯ ಮತ್ತು ಗಾಯನ ಮಾಡಿದರು. ಶ್ರೀಮತಿ ವಾಣಿ ಸುಬ್ಬಯ್ಯನವರು ಕಾರ್ಯಕ್ರಮದ ನಂತರ 2ನೆಯ ತರಗತಿಯ ಮಕ್ಕಳಿಗೆ ಪ್ರತ್ಯೇಕವಾಗಿ ‘ಕಡಲು’ ಪದ್ಯದ ವಾಚನ, ಗಾಯನ, ವ್ಯಾಖ್ಯಾನ ಮಾಡಿದರು.

ಮೈಸೂರು, ಜ.10: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಮಕರ ಸಂಕ್ರಾಂತಿ ಮತ್ತು ಸ್ವಾಮಿ ವಿವೇಕಾನಂದರ ಜಯಂತಿಯನ್ನು ಆಚರಿಸಲಾಯಿತು. ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಗೋಪೂಜೆಯನ್ನು ಮಾಡಿ ಫಲ ತಾಂಬೂಲದ ನೈವೇದ್ಯವನ್ನು ಮಾಡಲಾಯಿತು. ಜೊತೆಗೆ ಹೊಸ ಮಡಿಕೆ ಮತ್ತು ಒಲೆಯನ್ನು ಪೂಜಿಸಿ ಪೊಂಗಲ್ ಮಾಡಲಾಯಿತು. ವಿದ್ಯಾರ್ಥಿಗಳು ಸಂಕ್ರಾಂತಿಯ ಹಾಗೂ ಸ್ವಾಮಿ ವಿವೇಕಾನಂದರ ಜಯಂತಿಯ ಮಹತ್ತ್ವವನ್ನು ತಿಳಿಸಿದರು. ಸಮೂಹ ಗಾಯನವನ್ನು ಹಾಡಿದರು. ಹಾಗೆಯೇ “ಸುಗ್ಗಿ ಕಾಲ ಹಿಗ್ಗಿ ಬಂದಿತು” ಹಾಡಿಗೆ ನರ್ತಿಸಿದರು. ಮಾತ್ರವಲ್ಲದೆ ಅಮೆರಿಕದ ಚಿಕಾಗೋ ನಗರದಲ್ಲಿ ನಡೆದಂತಹ ಸ್ವಾಮಿ ವಿವೇಕಾನಂದರ ಭಾಷಣದ ಸನ್ನಿವೇಶವನ್ನು ಅಣುಕು ಪ್ರದರ್ಶನ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಎಳ್ಳು ಬೀರಲಾಯಿತು. ಸಿಹಿ ಪೊಂಗಲನ್ನು ಸಹ ಹಂಚಲಾಯಿತು.

Scroll to Top