Kartika Deepotsava Celebration in RVK – Vijayanagar

Home > News & Events >Kartika Deepotsava Celebration in RVK – Vijayanagar

Mysuru, Nov. 23: “The family atmosphere plays a major role in instilling discipline, restraint and Indian culture in children who are future citizens” – Sri Chandrakant Lokre. Kartika Deepotsava was celebrated herein Rashtrotthana Vidya Kendra – Vijayanagar. Sri Chandrakant Lokre, an RSS activist and currently working as the coordinator of Family Education in Mysuru City, graced the program. The program began with the worship of Mother Cow. Tulsi Puja was performed under the leadership of Sanskrit Teachers, Sri Nagesh and Sri Kiran Sahukar. The school students presented a cultural program. After the chief guest lit the lamp for Mother India, all the parents lit the lamp. A bhajan and dance program given by the parents took place during the lighting of the lamp.

ಮೈಸೂರು, ನ. 23: “ಮುಂದಿನ ಪ್ರಜೆಗಳಾದ ಮಕ್ಕಳಲ್ಲಿ ಶಿಸ್ತು, ಸಂಯಮ ಮತ್ತು ಭಾರತೀಯ ಸಂಸ್ಕೃತಿಯನ್ನು ಬೆಳಸುವಲ್ಲಿ ಕುಟುಂಬದ ವಾತಾವರಣವು ಪ್ರಧಾನ ಪಾತ್ರ ವಹಿಸುತ್ತದೆ” – ಶ್ರೀ ಚಂದ್ರಕಾಂತ ಲೋಕ್ರೆ. ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಕಾರ್ತಿಕ ದೀಪೋತ್ಸವವನ್ನು ನೆರವೇರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆರ್.ಎಸ್.ಎಸ್. ಕಾರ್ಯಕರ್ತರು, ಪ್ರಸ್ತುತ ಮೈಸೂರು ಮಹಾನಗರದ ಕುಟುಂಬ ಪ್ರಬೋಧನದ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಚಂದ್ರಕಾಂತ ಲೋಕ್ರೆ ಅವರು ಆಗಮಿಸಿದ್ದರು. ಗೋಮಾತೆಯ ಪೂಜೆಯ ಮೂಲಕ ಕಾರ್ಯಕ್ರಮವು ಆರಂಭವಾಯಿತು. ಸಂಸ್ಕೃತ ಶಿಕ್ಷಕರಾದ ಶ್ರೀ ನಾಗೇಶ್ ಮತ್ತು ಶ್ರೀ ಕಿರಣ್ ಸಾಹುಕಾರ್ ಅವರ ನೇತೃತ್ವದಲ್ಲಿ ತುಳಸಿ ಪೂಜೆಯು ನೆರವೇರಿತು. ಶಾಲಾ ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರದರ್ಶಿಸಿದರು. ಮುಖ್ಯ ಅತಿಥಿಗಳು ಭಾರತ ಮಾತೆಗೆ ದೀಪಾರತಿ ಬೆಳಗಿದ ನಂತರ ಪೋಷಕರೆಲ್ಲರು ದೀಪ ಬೆಳಗಿದರು. ದೀಪ ಬೆಳಗುವ ಸಂದರ್ಭದಲ್ಲಿ ಪೋಷಕರ ಭಜನೆ ಮತ್ತು ನೃತ್ಯ ಕಾರ್ಯಕ್ರಮವು ನಡೆಯಿತು.

Scroll to Top