Mysuru, Sept 11: Ganeshotsava was celebrated herein Rashtrotthana Vidya Kendra – Vijayanagar. An idol of eco-friendly Ganesha was installed. The children explained the importance of Ganesh Puja through mythological stories.The students worshiped Ganesha, who is a lover of music and dance, through devotional songs and dance performances. After that, ritualistic worship of Lord Ganesha was performed. A procession was held in the streets near the school with traditional rituals and the Ganpati idol was dissolved.
ಮೈಸೂರು, ಸಪ್ಟೆಂಬರ್ 11: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಗಣೇಶೋತ್ಸವವನ್ನು ಆಚರಿಸಲಾಯಿತು. ಪರಿಸರಪ್ರಿಯ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿತ್ತು.ಮಕ್ಕಳು ಪುರಾಣಕಥೆಗಳ ಮೂಲಕ ಗಣೇಶ ಪೂಜೆಯ ಪ್ರಾಮುಖ್ಯತೆಯನ್ನು ವಿವರಿಸಿದರು.ವಿದ್ಯಾರ್ಥಿಗಳು ಭಕ್ತಿ ಗೀತೆಗಳು ಹಾಗೂ ನೃತ್ಯ ಪ್ರದರ್ಶನಗಳ ಮೂಲಕ ಸಂಗೀತ ಮತ್ತು ನಾಟ್ಯ ಪ್ರಿಯ ಗಣೇಶನನ್ನು ಭಜಿಸಿದರು. ಅನಂತರ ಶಾಸ್ತ್ರೋಕ್ತವಾಗಿ ಗಣೇಶನ ಪೂಜಾ ಕೈಂಕರ್ಯವು ನೆರವೇರಿತು. ಸಾಂಪ್ರದಾಯಿಕ ಆಚರಣೆಯೊಂದಿಗೆ ಶಾಲಾ ಸಮೀಪದ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಗಣಪತಿ ಮೂರ್ತಿ ವಿಸರ್ಜನೆ ನೆರವೇರಿಸಲಾಯಿತು.