








Mysuru, Mar. 22: A blood donation camp was organized herein Rashtrotthana Vidya Kendra – Vijayanagar. To commemorate the 60th anniversary of the Rashtrotthana Parishat, Rashtrotthana Vidya Kendra – Vijayanagar School organized a blood donation camp in collaboration with Rashtrotthana Blood Centre – Bengaluru.To organize this program, approximately 1000 pamphlets were printed and people in the surrounding areas of the school were contacted. In addition, with the cooperation of our own school teachers, drivers, helpers and parents, about 100 units of blood were collected.
ಮೈಸೂರು, ಮಾ. 22: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.ರಾಷ್ಟ್ರೋತ್ಥಾನ ಪರಿಷತ್ತು 60 ವರ್ಷಗಳನ್ನು ಪೂರೈಸಿದ ಸವಿನೆನಪಿಗಾಗಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರ ಶಾಲೆಯು, ಬೆಂಗಳೂರಿನ ರಾಷ್ಟ್ರೋತ್ಥಾನ ರಕ್ತಕೇಂದ್ರದ ಸಹಕಾರದೊಂದಿಗೆ ರಕ್ತದಾನ ಶಿಬಿರವನ್ನು ಏರ್ಪಡಿಸಿತ್ತು.ಈ ಕಾರ್ಯಕ್ರಮವನ್ನು ಏರ್ಪಡಿಸಲು ಸರಿಸುಮಾರು 1000 ಕರಪತ್ರಗಳನ್ನು ಮುದ್ರಿಸಿ ಶಾಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಜನರನ್ನು ಸಂಪರ್ಕಿಸಲಾಯಿತು. ಜೊತೆಗೆ ನಮ್ಮದೇ ಶಾಲೆಯ ಶಿಕ್ಷಕರು, ಚಾಲಕರು, ಸಹಾಯಕರು ಮತ್ತು ಪೋಷಕರ ಸಹಕಾರವನ್ನು ಪಡೆದು ಸುಮಾರು 100 ಯೂನಿಟ್ ಅಷ್ಟು ರಕ್ತವನ್ನು ಸಂಗ್ರಹಿಸಲಾಯಿತು.