Mysuru , Oct. 8: Annual sports meet was organized herein Rashtrotthana Vidya Kendra – Vijayanagar. International badminton player Ku. B. Diya Bhimaiah graced the program. The Chief Guest addressed the students and said that “Sports play an important role in all-round development”. Harish Shenai, a member of the Steering Committee of Rashtrotthana Schools, Mysuru, said, “Describing the achievements of Diya Bhimaiah, an international level player, who practiced badminton in a positive manner even in the worst situation like Kovid-19, such an achievement is an inspiration to you.” Students enthusiastically participated in the sports event. Sports competitions were also organized for the parents and more than 400 parents participated in the sports competitions. Teaching and non-teaching staff also participated in various sports. Finally, the sports event was brought down by lowering the sports flag.
ಮೈಸೂರು, ಅ. 8: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ್ತಿಯಾದ ಕು. ಬಿ. ದಿಯಾ ಭೀಮಯ್ಯ ಅವರು ಆಗಮಿಸಿದ್ದರು. ಮುಖ್ಯ ಅತಿಥಿಗಳು ವಿದ್ಯಾರ್ಥಿಗಳನ್ನು ಉದ್ದೇಶಿಸಿ “ಸರ್ವತೋಮುಖ ಬೆಳವಣಿಗೆಯಲ್ಲಿ ಕ್ರೀಡೆಯು ಮಹತ್ತ್ವದ ಪಾತ್ರ ವಹಿಸುತ್ತದೆ” ಎಂದರು. ಮೈಸೂರಿನ ರಾಷ್ಟ್ರೋತ್ಥಾನ ಶಾಲೆಗಳ ಸಂಚಾಲನಾ ಸಮಿತಿಯ ಸದಸ್ಯರಾದ ಹರೀಶ್ ಶೆಣೈಯವರು ಮಾತನಾಡುತ್ತ “ಕೋವಿಡ್-19ರಂತಹ ವಿಷಮ ಪರಿಸ್ಥಿತಿಯನ್ನು ಸಹ ಧನಾತ್ಮಕವಾಗಿ ಬಳಸಿಕೊಂಡು ಬ್ಯಾಡ್ಮಿಂಟನ್ ಅಭ್ಯಾಸ ಮಾಡಿ ಅಂತರರಾಷ್ಟ್ರೀಯ ಮಟ್ಟದ ಆಟಗಾರ್ತಿಯಾದ ದಿಯಾ ಭೀಮಯ್ಯರವರ ಸಾಧನೆಯನ್ನು ಸೋದಾಹರಣವಾಗಿ ವಿವರಿಸುತ್ತಾ, ಇಂತಹ ಸಾಧಕರೆ ನಿಮಗೆ ಸ್ಫೂರ್ತಿಯ ಸೆಲೆ” ಎಂದರು. ವಿದ್ಯಾರ್ಥಿಗಳು ಉತ್ಸಾಹದಿಂದ ಕ್ರೀಡಾಕೂಟದಲ್ಲಿ ಪಾಲ್ಗೊಂಡರು. ಪೋಷಕರಿಗೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿದ್ದು ವಿಶೇಷವಾಗಿದ್ದು, 400ಕ್ಕೂ ಹೆಚ್ಚು ಪೋಷಕರು ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸಿದರು. ಬೋಧಕ-ಬೋಧಕೇತರ ನೌಕರರೂ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿದ್ದರು. ಕೊನೆಯದಾಗಿ ಕ್ರೀಡಾ ಧ್ವಜ ಅವರೋಹಣ ಮಾಡುವ ಮೂಲಕ ಕ್ರೀಡಾಕೂಟಕ್ಕೆ ತೆರೆ ಎಳೆಯಲಾಯಿತು.