Mysuru, July 21: Painting competition, masquerade competitions for primary school children and essay competition on the subject “My Role in Building a Strong India” by Akhila Bharatiya Sahitya Parishad herein Rashtrotthana Vidya Kendra – Vijayanagar. Sri Subramanya S. Masarahalli, Sri H D Ramesh, Smt. Sadhana Tantri were the Guests of Honor of the program. Dr. Geeta was present as Judge.The chief guest spoke about the inevitability of the Kargil war and the sacrifices of the soldiers and sowed the basic mantra of patriotism among the students.Principals, teaching and non-teaching staff and various school students, various school teaching staff and parents were present.
ಮೈಸೂರು, ಜುಲೈ 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಅಖಿಲಭಾರತೀಯ ಸಾಹಿತ್ಯ ಪರಿಷದ್ ವತಿಯಿಂದ ದೇಶಪ್ರೇಮವನ್ನು ಬೆಳೆಸುವಂತಹ ವಿಷಯವನ್ನು ಆಧಾರವಾಗಿಟ್ಟುಕೊಂಡು ಪ್ರಾಥಮಿಕ ಶಾಲಾ ಹಂತದ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ, ಛದ್ಮವೇಷ ಸ್ಪರ್ಧೆಗಳನ್ನು, ಪ್ರೌಢಶಾಲೆ ಶಾಲಾ ಮಕ್ಕಳಿಗೆ “ಸದೃಢ ಭಾರತ ನಿರ್ಮಾಣದಲ್ಲಿ ನನ್ನ ಪಾತ್ರ” ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಶ್ರೀ ಸುಬ್ರಮಣ್ಯ ಎಸ್. ಮಸರಹಳ್ಳಿ, ಶ್ರೀ ಎಚ್. ಡಿ. ರಮೇಶ್, ಶ್ರೀಮತಿ ಸಾಧನ ತಂತ್ರಿ ಆಗಮಿಸಿದ್ದರು. ತೀರ್ಪುಗಾರರಾಗಿ ಡಾ. ಗೀತಾರವರು ಉಪಸ್ಥಿತರಿದ್ದರು.ಮುಖ್ಯ ಅತಿಥಿಗಳು ಕಾರ್ಗಿಲ್ ಯುದ್ಧದ ಅನಿವಾರ್ಯತೆ ಮತ್ತು ಸೈನಿಕರ ತ್ಯಾಗ ಬಲಿದಾನವನ್ನು ತಿಳಿಸುತ್ತಾ ವಿದ್ಯಾರ್ಥಿಗಳಲ್ಲಿ ದೇಶಾಭಿಮಾನದ ಮೂಲ ಮಂತ್ರವನ್ನು ಬಿತ್ತಿದರು. ಪ್ರಧಾನಾಚಾರ್ಯರು, ಬೋಧಕ – ಬೋಧಕೇತರ ವರ್ಗ ಹಾಗೂ ವಿವಿಧ ಶಾಲಾ ವಿದ್ಯಾರ್ಥಿಗಳು, ವಿವಿಧ ಶಾಲಾ ಬೋಧಕವರ್ಗ ಹಾಗೂ ಪೋಷಕ ಬಂಧುಗಳು ಉಪಸ್ಥಿತರಿದ್ದರು.