




















Mysuru, June 21: International Yoga Day was celebrated herein Rashtrotthana Vidya Kendra – Vijayanagar. Dr. M. C. Jayaram, a prominent sportsperson, renowned Yoga Practitioner and Ayurveda expert, addressed the programme as the Chief Guests and spoke about the ancient Indian knowledge of yoga and its relevance in modern times. He stressed how regular yoga practice can lead to better focus, emotional balance and a healthy life. A mass yoga demonstration was held by the school students under the guidance of the school yoga teacher.
ಮೈಸೂರು, ಜೂ. 21: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಕ್ರೀಡಾ ಭಾರತಿ ಪ್ರಾಂತ ಪ್ರಮುಖರು, ಪ್ರಸಿದ್ಧ ಯೋಗ ಸಾಧಕರು ಮತ್ತು ಆಯುರ್ವೇದ ತಜ್ಞರು ಡಾ. ಎಂ. ಸಿ. ಜಯರಾಮ್ರವರು ಆಗಮಿಸಿದ್ದು ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಚೀನ ಭಾರತೀಯ ಯೋಗದ ಜ್ಞಾನ ಮತ್ತು ಆಧುನಿಕ ಕಾಲದಲ್ಲಿ ಅದರ ಪ್ರಸ್ತುತತೆಯ ಬಗ್ಗೆ ಮಾತನಾಡಿದರು. ನಿಯಮಿತ ಯೋಗಾಭ್ಯಾಸವು ಉತ್ತಮ ಗಮನ, ಭಾವನಾತ್ಮಕ ಸಮತೋಲನ ಮತ್ತು ಆರೋಗ್ಯಕರ ಜೀವನಕ್ಕೆ ಹೇಗೆ ಕಾರಣವಾಗಬಹುದು ಎಂಬುದನ್ನು ಅವರು ಒತ್ತಿ ಹೇಳಿದರು. ಶಾಲೆಯ ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಸಾಮೂಹಿಕ ಯೋಗ ಪ್ರದರ್ಶನ ನಡೆಯಿತು.