Mysuru, Nov. 15-16: Mathematics Festival – 2024 was celebrated herein Rashtrotthana Vidya Kendra – Vijayanagar.
Sri B.S. Krishnamurthy, Founder and Coordinator of ‘Dance with Maths’ graced the program. The function was presided over by Sri Mallaraje Urs, Member, Sanchalana Committee, Rashtrotthana Vidya Kendra. Principals Sri Shivaraj N., Sri Chandrashekhar, Administrators of Rashtrotthana Schools, Mysuru, were present. Students and Teachers of Rashtrotthana Vidya Kendras across Karnataka were participated.
Speaking at the inauguration of the programme, the Chief Guest apprised the students about the importance of integrating Mathematics in our daily lives and innovative learning through Maths with Dance (the art of learning Mathematics). The sessions held here included various interactive sessions that tested problem-solving and reasoning skills. Resource persons from various branches conducted sessions on fun learning activities.
ಮೈಸೂರು, ನ. 15-16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರದಲ್ಲಿ ಗಣಿತೋತ್ಸವ – 2024 ಅನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ‘ಡಾನ್ಸ್ ವಿತ್ ಮ್ಯಾತ್ಸ್’ ಸಂಸ್ಥೆಯ ಸಂಸ್ಥಾಪಕ ಮತ್ತು ಸಂಯೋಜಕರಾದ ಶ್ರೀ ಬಿ. ಎಸ್. ಕೃಷ್ಣಮೂರ್ತಿ ಅವರು ಆಗಮಿಸಿದ್ದರು. ಅಧ್ಯಕ್ಷತೆಯನ್ನು ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆಯ ಸಂಚಾಲನಾ ಸಮಿತಿಯ ಸದಸ್ಯರಾದ ಶ್ರೀ ಮಲ್ಲರಾಜೆ ಅರಸ್ ಅವರು ವಹಿಸಿದ್ದರು. ಪ್ರಧಾನಾಚಾರ್ಯರಾದ ಶ್ರೀ ಶಿವರಾಜ್ ಎನ್.; ಶ್ರೀ ಚಂದ್ರಶೇಖರ್, ರಾಷ್ಟ್ರೋತ್ಥಾನ ಶಾಲೆಗಳ ಆಡಳಿತಾಧಿಕಾರಿಗಳು, ಮೈಸೂರು, ಇವರುಗಳು ಉಪಸ್ಥಿತರಿದ್ದರು.ಕರ್ನಾಟಕದಾದ್ಯಂತ ರಾಷ್ಟ್ರೋತ್ಥಾನ ವಿದ್ಯಾಕೇಂದ್ರಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿಗಳು ನಮ್ಮ ದೈನಂದಿನ ಜೀವನದಲ್ಲಿ ಗಣಿತದ ಏಕೀಕರಣದ ಪ್ರಾಮುಖ್ಯತೆ ಮತ್ತು ಗಣಿತ ಕುಣಿತದಿಂದ (ಗಣಿತವನ್ನು ಕಲಿಯುವ ಕಲೆ) ವಿನೂತನ ಕಲಿಕೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.ಇಲ್ಲಿ ನಡೆದ ಅವಧಿಗಳು ಸಮಸ್ಯೆಯನ್ನು ಪರಿಹರಿಸುವ ಮತ್ತು ತಾರ್ಕಿಕ ಕೌಶಲ್ಯಗಳನ್ನು ಪರೀಕ್ಷಿಸುವ ವಿವಿಧ ಸಂವಾದಾತ್ಮಕ ಅವಧಿಗಳನ್ನು ಒಳಗೊಂಡಿತ್ತು. ವಿವಿಧ ಶಾಖೆಗಳ ಸಂಪನ್ಮೂಲ ವ್ಯಕ್ತಿಗಳು ವಿನೋದದಿಂದ ಕಲಿಯುವ ಚಟುವಟಿಕೆಗಳ ಮೇಲೆ ಅವಧಿಗಳನ್ನು ನಡೆಸಿಕೊಟ್ಟರು.